ಪೊಲೀಸರ ದೌರ್ಜನ್ಯ ;ಕಳ್ಳತನದ ಆರೋಪದ ಹಿನ್ನಲೆಯಲ್ಲಿ ನೇಣಿಗೆ ಶರಣಾಗಿ ಪ್ರಾಣ ಕಳೆದು ಕೊಂಡ 3 ಜನ!

ಪೊಲೀಸರ ದೌರ್ಜನ್ಯ ;ಕಳ್ಳತನದ ಆರೋಪದ ಹಿನ್ನಲೆಯಲ್ಲಿ ನೇಣಿಗೆ ಶರಣಾಗಿ ಪ್ರಾಣ ಕಳೆದು ಕೊಂಡ 3 ಜನ!

ಶೇರ್‌ ಮಾಡಿ
 •  
 •  
 •  
 •  
 •  
 •  

ವಿಜಯಪುರ :ಪೊಲೀಸರು ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಮನನೊಂದು ಮೂಲತ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಗ್ರಾಮದ ಒಂದೇ ಕುಟುಂಬದ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋವಾದ ಜುವಾರಿನಗರ ಬಿರ್ಲಾದಲ್ಲಿ ನಡೆದಿದೆ.

ಜುವಾರಿನಗರ ಬಿರ್ಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಹುಲಗೆಪ್ಪ ಅಂಬಿಗೇರ (35), ಈತನ ಸಹೋದರ ಗಂಗಪ್ಪ ಅಂಬಿಗೇರ (29) ಹಾಗೂ ಹುಲಗೆಪ್ಪನ ಪತ್ನಿ ದೇವಮ್ಮಾ ಅಂಬಿಗೇರ ( 28) ಆತ್ಮಹತ್ಯೆ ಮಾಡಿಕೊಂಡವರು.

ಊರಲ್ಲಿ ಕೆಲಸ ಸಿಗದಿದ್ದಾಗ ಹುಲಗೆಪ್ಪ ಅಂಬಿಗೇರ, ಪತ್ನಿ, ಸಹೋದರ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಗೋವಾದ ಜುವಾರಿನಗರ ಬಿರ್ಲಾಕ್ಕೆ ಹೋಗಿ ಕೂಲಿ ಮಾಡಿಕೊಂಡಿದ್ದರು.

ದೇವಮ್ಮಾ ಅವರ 17 ವರ್ಷದ ಸಹೋದರ ಸಹ ಜುವಾರಿನಗರ ಬಿರ್ಲಾಕ್ಕೆ ಬಂದು ಇವರೊಂದಿಗೆ ವಾಸವಾಗಿದ್ದ. ಈತ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ.

ಕೆಲ ದಿನಗಳ ಹಿಂದೆ ಪೊಲೀಸರು ಕಳ್ಳತನ ಆರೋಪದ ಮೇಲೆ ಇವರ ಮನೆಗೆ ಬಂದು ದೇವಮ್ಮಳ ಸಹೋದರನನ್ನ ಕರೆದುಕೊಂಡು ಹೋಗಿದ್ದರು.

ಕಾರಣ ಕೇಳಲು ಠಾಣೆಗೆ ಹೋದ ದೇವಮ್ಮಾ ಹಾಗೂ ಅವಳ ಪತಿಯನ್ನು ಪೊಲೀಸರು ಬೆದರಿಸಿ ಕಳುಹಿಸಿದ್ದರು.

ಇದಾದ ಕೆಲ ದಿನಗಳ ಬಳಿಕ ದೇವಮ್ಮಾ, ಹುಲಗೆಪ್ಪ ಹಾಗೂ ಗಂಗಪ್ಪ ಅವರನ್ನೂ ವಿಚಾರಣೆಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ಜುವಾರಿನಗರದ ಮನೆಯೊಂದರಲ್ಲಿ 10 ಲಕ್ಷ ರೂ. ಬೆಲೆಬಾಳುವ ಬಂಗಾರದ ಆಭರಣಗಳು ಕಳ್ಳತನವಾಗಿವೆ. ಈ ಕಳ್ಳತನದಲ್ಲಿ ನಿಮ್ಮ ಕುಟುಂಬದ ಕೈವಾಡವಿದೆ ಎಂದು ಪೊಲೀಸರು ತನಿಖೆ ಮಾಡಲು ಠಾಣೆಗೆ ಕರೆದುಕೊಂಡು ಹೋಗಿದ್ದರು.

ಠಾಣೆಯಲ್ಲಿ ಮೂವರನ್ನು ಕೂಡಿ ಹಾಕಿ, ಬಳಿಕ ದೇವಮ್ಮಳ ಸಹೋದರನನ್ನು ಪೊಲೀಸರು ಎಲ್ಲೋ ಕರೆದುಕೊಂಡು ಹೋಗಿದ್ದರು. ಕೆಲ ವಸ್ತುವಿನೊಂದಿಗೆ ಠಾಣೆಗೆ ಮರಳಿದರು. ಆ ಬಳಿಕ ದೇವಮ್ಮಾ, ಹುಲಗೆಪ್ಪ, ಗಂಗಪ್ಪ ಅವರನ್ನು ಠಾಣೆಯಿಂದ ಬಿಟ್ಟು ಕಳುಹಿಸಿದರು. ಮನೆಗೆ ಬಂದು ಮೂವರು ನೇಣುಹಾಕಿಕೊಂಡು ಸಾವನಪ್ಪಿದ್ದಾರೆ ಎನ್ನಲಾಗಿದೆ.

ಈ ಪ್ರಕರಣ ವರ್ನಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ…


ಶೇರ್‌ ಮಾಡಿ
 •  
 •  
 •  
 •  
 •  
 •  

Leave a Reply

Your email address will not be published. Required fields are marked *