ಮೊಬೈಲ್​ ಚಾರ್ಜರ್‌​ನಿಂದ ಪತ್ನಿಯನ್ನು ಕೊಂದು ಪರಾರಿಯಾದ ಪತಿ.

ಶೇರ್‌ ಮಾಡಿ
 •  
 •  
 •  
 •  
 •  
 •  

ಕುಷ್ಟಗಿ :-ಜಿಲ್ಲೆ ​ಕುಷ್ಟಗಿ ಸರಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನರ್ಸ್ ನ ಪತಿ ತನ್ನ ಪತ್ನಿಯನ್ನು ಮೊಬೈಲ್​ ಚಾರ್ಜರ್​ ವೈಯರ್ ನಿಂದ ಕೊಲೆ ಮಾಡಿ ಘಟನೆ ಕುಷ್ಟಗಿ ಪಟ್ಟಣದ ಹೊರ ಹೊಲಯದಲ್ಲಿ ನೆಡೆದಿದೆ.

ನರ್ಸ್ ಯಲಬುರ್ಗಾ ತಾಲೂಕಿನ ಯಡ್ಡೋಣಿ ನಿವಾಸಿಯಾಗಿದ್ದು ಮಂಜುಳಾ ಮಂಜುನಾಥ ಕಟ್ಟಿಮನಿ (25) ಮೃತಪಟ್ಟ ನರ್ಸ್ ಎಂದು ಗುರುತಿಸಲಾಗಿದೆ.ತಾಲೂಕಿನ ಸರ್ಕಾರಿ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಮಂಜುಳಾ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೊಪ್ಪಳ ತಾಲೂಕು ಮುದ್ದಾಬಳ್ಳಿ ಎಂಬ ಗ್ರಾಮದ ಮಂಜುನಾಥ ಕಟ್ಟಿಮನಿ ಎಂಬುವರೊಂದಿಗೆ ಮದುವೆಯಾಗಿತ್ತು.ನರ್ಸ್ ನ ಪತಿ ಮಂಜುನಾಥ ಕಟ್ಟಿಮನಿ ಕುಷ್ಡಗಿ ಪಟ್ಟಣದ ಕೆನರಾ ಬ್ಯಾಂಕಿನಲ್ಲಿ ಅಡೆಂಡರ್ ಆಗಿ ಕೆಲಸ ಮಾಡುತ್ತಿದ್ದರು ಆದರೆ ಈ ನರ್ಸ್ ನ ಪತಿ ಬೇರೊಂದು ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಕಾರಣದಿಂದಲೇ ಮನಸ್ತಾಪಗೊಂಡ ಮಂಜುಳಾ ಪತಿ-ಪತ್ನಿಯೊಂದಿಗೆ ಮನೆಯಲ್ಲಿ ಆಗಾಗ್ಗೆ ಇವರ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.


ಗುರುವಾರ ರಾತ್ರಿ ಬೃಂದಾವನ ಹೋಟೆಲ್​ನಲ್ಲಿ ಇಬ್ಬರೂ ಜೊತೆಗೂಡಿ ಊಟ ಮಾಡಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದ ಸ್ಟೇಟಸ್‌​ನಲ್ಲಿ ಹಂಚಿಕೊಂಡಿದ್ದಾರೆ. ನಂತರ ಇಬ್ಬರ ನಡುವೆ ಜಗಳವಾಗಿದ್ದು, ಪತಿ ಮಂಜುನಾಥ ಪತ್ನಿಯನ್ನು ಮೊಬೈಲ್ ಚಾರ್ಜರ್ ವೈಯರ್​ನಿಂದ ಕುತ್ತಿಗೆಗೆ ಬಿಗಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದಾನೆ. ನಂತರ ಮೃತದೇಹವನ್ನು ಕೊಪ್ಪಳ ರಸ್ತೆಯ ಸಜ್ಜೆ ಹೊಲದಲ್ಲಿ ಎಸೆದು ಪರಾರಿಯಾಗಿದ್ದಾನೆ.

ಖಚಿತ ಮಾಹಿತಿ ಮೇರೆಗೆ ಕೊಲೆಯಾದ ಘಟನೆಯ ಸ್ಥಳಕ್ಕೆ ದೌಡಾಯಿಸಿದ ಕುಷ್ಟಗಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಕುಷ್ಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣವು ಕೂಡ ದಾಖಲಾಗಿದೆ.


ಶೇರ್‌ ಮಾಡಿ
 •  
 •  
 •  
 •  
 •  
 •  

Leave a Reply

Your email address will not be published. Required fields are marked *