-0 C
New York
Thursday, June 24, 2021
Home ಅಪರಾಧ ಕೋವಿಡ್ ನಿಯಮ ಉಲ್ಲಂಘಿಸಿ ಮನೋರಂಜನೆ ಕಾರ್ಯಕ್ರಮ.. ಪ್ರಕರಣ ದಾಖಲು...

ಕೋವಿಡ್ ನಿಯಮ ಉಲ್ಲಂಘಿಸಿ ಮನೋರಂಜನೆ ಕಾರ್ಯಕ್ರಮ.. ಪ್ರಕರಣ ದಾಖಲು…

ಕೊಪ್ಪಳ: ಪಟ್ಟಣದ ಉದ್ಯಮಿಯೊಬ್ಬರು ಶನಿವಾರ ಸಂಜೆ ಕೋವಿಡ್ ನಿಯಮ ಉಲ್ಲಂಘಿಸಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿದ್ದು, ಭಾನುವಾರ ಸ್ಥಳೀಯರ ದೂರಿನ ಮೇರೆಗೆ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

ರೂಪಾಂತರ ಕೊರೋನಾ ಉಲ್ಬಣ ಹಿನ್ನೆಲೆ ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾಧಿಕಾರಿ ಅವರು ಕೋವಿಡ್ ಸೋಂಕು ತಡೆಗಟ್ಟಲು ಸಭೆ, ಸಮಾರಂಭ, ಮನೋರಂಜನೆ ಕಾರ್ಯಕ್ರಮ, ಸಂತೆ, ಜಾತ್ರೆ, ಉತ್ಸವಗಳನ್ನು ನಡೆಸದಂತೆ ಜಿಲ್ಲೆಯಾದ್ಯಂತ ಹಲವು ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಜತೆಗೆ ಸಾರ್ವಜನಿಕರಲ್ಲಿ ಕಡ್ಡಾಯವಾಗಿ ದೈಹಿಕ ಅಂತರ ಕಾಪಾಡುವುದು, ಮಾಸ್ಕ್(ಮುಖಗವುಸು) ಧರಿಸುವ ಮೂಲಕ ಕೊರೋನಾ ತೊಲಗಿಸುವಲ್ಲಿ ಸರ್ಕಾರದ ಜತೆಗೆ ಕೈಜೋಡಿಸಿ ಎಂದು ಪ್ರತಿನಿತ್ಯ ಪುರಸಭೆಯಿಂದ ಕ್ಯಾನ್ವಾಸಿನ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಇಲ್ಲಿಯ ಉದ್ಯಮಿ ವಜೀರ್ ಅಲಿ ಬಾಬುಸಾಬ ಗೋನಾಳ ಎಂಬುವರು ತಮ್ಮ ಸ್ನೇಹಿತರ ಬಳಗದೊಂದಿಗೆ ಪಟ್ಟಣದ ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಶನಿವಾರ ಸಂಜೆ ರಸಮಂಜರಿ ಸಂಗೀತ ಕಾರ್ಯಕ್ರಮ ಆಯೋಜಿಸಿ ಸುಮಾರು 150 ರಿಂದ 200ಕ್ಕೂ ಹೆಚ್ಚು ಜನರನ್ನು ಸೇರಿಸಿ ಕೋವಿಡ್-19 ಮಾರ್ಗ ಸೂಚಿ ನಿಯಮಗಳನ್ನು ಉಲ್ಲಂಘನೆ ಮಾಡಿ ಕಾರ್ಯಕ್ರಮ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಷ್ಟೇ ಅಲ್ಲದೆ ಕಾರ್ಯಕ್ರಮ ವೀಕ್ಷಣೆಗೆ ಬಂದವರಲ್ಲಿ ಯಾರೂ ಸಹ ದೈಹಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೇ ಭಾಗವಹಿಸಿದ್ದಾರೆ. ಜತೆಗೆ ಕಾರ್ಯಕ್ರಮ ಆಯೋಜನೆಗೂ ಮುನ್ನ ಪುರಸಭೆ, ಪೊಲೀಸ್ ಇಲಾಖೆಯಿಂದ ಯಾವುದೇ ಪೂರ್ವ ಪರವಾನಿಗೆ ಸಹ ಪಡೆಯದೇ ಕಾರ್ಯಕ್ರಮ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೊರೋನಾ ಸೋಂಕು ತಗುಲಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸ್ಥಳೀಯ ದೂರುದಾರ ಉಮೇಶ ತಂ. ಕಾಶಯ್ಯ ಹಿರೇಮಠ ಎಂಬುವರು ಭಾನುವಾರ ಈ ಕುರಿತು ಪೊಲೀಸ್ ಠಾಣೆಗೆ ನೀಡಿದ್ದಾರೆ. ದೂರಿನ ಮೇರೆಗೆ ಪಿಎಸ್ಐ ತಿಮ್ಮಣ್ಣ ಅವರು 188, 269 ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

RELATED ARTICLES

Leave a reply

Please enter your comment!
Please enter your name here

Most Popular

Recent Comments

error: Content is protected !!