ಕೊಪ್ಪಳ:ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಂಡನೇ ಹೆಂಡತಿಯನ್ನು ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣದ ಬಸವಣ್ಣ ಕ್ಯಾಂಪಿನ್ ಶಿಕ್ಷಕರ ಭವನದ ಸರ್ಕಾರಿ ಕೊಠಡಿಯಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ದುರ್ದೈವಿ ಗೀತಾ ಮಾಂತೇಷ ಗೌಳಿ (38) ಎಂದು ಗುರುತಿಸಲಾಗಿದೆ.
ತಡರಾತ್ರಿ ಇಬ್ಬರು ಮಧ್ಯೆ ಜಗಳ ನಡೆದಿತ್ತೆನ್ನಲಾಗಿದ್ದು, ಜಗಳ ವಿಕೋಪಕ್ಕೆ ತೆರಳಿ ಗಂಡ ಮಾಂತೇಶ ಗೌಳಿ ಎಂಬಾತನು ಕಬ್ಬಿಣದ ರಾಡಿನಿಂದ ಹೊಡೆದು ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಮೃತಳಿಗೆ ಮೂವರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.