-0 C
New York
Wednesday, June 23, 2021
Home ಜಿಲ್ಲಾ ಸುದ್ದಿ ಅಂಬೇಡ್ಕರ್ ರಾಷ್ಟ್ರ ಪುರುಷರು.. ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಲ್ಲ...

ಅಂಬೇಡ್ಕರ್ ರಾಷ್ಟ್ರ ಪುರುಷರು.. ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಲ್ಲ…

ಕೊಪ್ಪಳ: ರಾಷ್ಟ್ರಪುರುಷರು ಹಾರದಲ್ಲಿರುವ ಪುಷ್ಪಗಳಿದ್ದಂತೆ. ಅವರು ಯಾವುದೇ ಜಾತಿ, ಧರ್ಮ, ಭಾಷೆ, ಸಂಸ್ಕೃತಿಗೆ ಸೀಮಿತರಲ್ಲ. ಅವರ ತತ್ವಾದರ್ಶಗಳು ಎಲ್ಲರಿಗೂ ಅನ್ವಯಿಸುವಂಥದ್ದು ಎಂದು ಡಾ॥ ಬಿ.ಆರ್ ಅಂಬೇಡ್ಕರ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಬಿ.ಗಿರೀಶಾನಂದ ಜ್ಞಾನಸುಂದರ ಅಭಿಪ್ರಾಯಪಟ್ಟರು.

ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ನಗರದ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಾಪುರುಷರನ್ನು ಒಂದು ಜನಾಂಗಕ್ಕೆ ಸೀಮಿತಗೊಳಿಸಿದರೆ ಅವರ ವಿಷಾಲತೆಯನ್ನು ಮೊಟಕುಗೊಳಿಸಿದಂತಾಗುತ್ತದೆ. ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ, ಶಿವಾಜಿ ಮುಂತಾದ ರಾಷ್ಟ್ರೀಯ ಪುರುಷರನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು. ಅವರ ವಿಚಾರಧಾರೆಗಳು ಎಲ್ಲ ವರ್ಗಕ್ಕೂ ಅನ್ವಯಿಸುಂಥವು ಎಂದರು.
ಕಾರ್ಯಕ್ರಮದಲ್ಲಿ ವಸತಿ ಕೇಂದ್ರದ ವ್ಯವಸ್ಥಾಪಕ ರವಿರಾಜ ದೊಡ್ಡಮನಿ, ಕೇರ್ ಟೇಕರ್ಸ ಪಾಂಡು ಪತ್ತಾರಿ, ಶರಣಯ್ಯ ಸಸಿಮಠ, ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಭೀಮವ್ವ ಬನ್ನಿಕಟ್ಟಿ, ಸಮಾಜಸೇವಾ ಕಾರ್ಯಕರ್ತೆ ಭಾರತಿ ಬೆಸ್ತರ ವಸತಿ ಕೇಂದ್ರದ ನಿವಾಸಿಗಳು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಕಟಣೆಯಲ್ಲಿ
ಬಿ.ಗಿರೀಶಾನಂದ ಜ್ಞಾನಸುಂದರ
ಕಾರ್ಯದರ್ಶಿಗಳು,
ಡಾ॥ ಬಿ.ಆರ್ ಅಂಬೇಡ್ಕರ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ (ರಿ) ಕೊಪ್ಪಳ.
ಮೊ: 9972762642

RELATED ARTICLES

Leave a reply

Please enter your comment!
Please enter your name here

Most Popular

Recent Comments

error: Content is protected !!