ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಕೇಸಿನಲ್ಲಿ ಡಿಕೆಶಿ ಹಾಗೂ ವಿಜಯೇಂದ್ರನ ಕೈವಾಡವಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಸಿಎಂ ಬಿಎಸ್ ವೈ ಗೆ ಡಿಕೆಶಿ ಮೇಲೆ ಸಾಪ್ಟ್ ಕಾರ್ನರ್ ಇದೆ. ಹೀಗಾಗಿ ಅವ್ರು ಯಾರೂ ಡಿಕೆಶಿ ವಿರುದ್ಧ ಮಾತಾಡ್ತಿಲ್ಲ ಎಂದರು.
ಅಲ್ಲದೇ, SIT ತನಿಖೆ ಮೇಲೆ ವಿಶ್ವಾಸವಿಲ್ಲ. CBI ತನಿಖೆಯಾದ್ರೆ ಸಿಡಿ ಗ್ಯಾಂಗ್ ಬಯಲಾಗಲಿದೆ. ಇನ್ನು ರಾಜಕೀಯದಲ್ಲಿ ಇಂತಹ ಕೆಟ್ಟ ಸಂಸ್ಕೃತಿ ಪ್ರಾರಂಭವಾದರೆ ಒಳಿತಲ್ಲ. ಇಂತವರು ರಾಜಕೀಯ ಬಂದರೆ ಬ್ರಷ್ಟಾಚಾರ, ಗುಂಡಾಗಿರಿ ಹೆಚ್ಚಾಗುತ್ತದೆ. ಇದೆಲ್ಲಸಕ್ಕೂ ಒಂದು ಅಂತ್ಯ ಆಗಬೇಕಿದೆ ಎಂದರು.
ಇನ್ನು ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಿಗೆ 25 ಸಾವಿರ ಕೋಟಿ ಕೊಡುತ್ತೇನೆ 6.5 ಸಾವಿರ ಕೋಟಿ ಕೊಟ್ಟರು. ಸದನದಲ್ಲಿ ಯಾವುದೇ ಅಭಿವೃದ್ಧಿ ಪರವಾದ ಚರ್ಚೆಗಳಾಗಲಿಲ್ಲ ಎಂದರು…