ವಿಜಯಪುರ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್. ಈಶ್ವರಪ್ಪ ಗಮನಕ್ಕೆ ತರದೇ ಹಣ ಬಿಡುಗಡೆ ಮಾಡಿದ್ದು ಸರಿಯಲ್ಲ ಎಂದು ಸಚಿವ ಕೆಎಸ್ಈ ಪರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬ್ಯಾಟಿಂಗ್ ಮಾಡಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಶಾಸಕರು ಹತ್ತು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿಸಲು ಸಾಕಾಗಿ ಹೋಗುತ್ತದೆ. ಆದ್ರೇ, ನೂರಾರು ಕೋಟಿ ಅನುಮೋದನೆ ಇಲ್ಲದೇ ಬಿಡುಗಡೆಯಾಗಿದೆ ಎಂದು ಯತ್ನಾಳ್ ಸಿಎಂ ಬಿಎಸ್ವೈ ಹಾಗೂ ವಿಜಯೇಂದ್ರ ವಿರುದ್ದ ಯತ್ನಾಳ ವಾಗ್ದಾಳಿ ಮಾಡಿದರು.
ಇನ್ನು ವಿಜಯೇಂದ್ರ ಪತ್ರಿಯೊಂದು ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದು ಸರಿಯಾದ ಬೆಳವಣಿಗೆ ಅಲ್ಲ. ಸಚಿವ ಸಂಪುಟದ ಎಲ್ಲಾ ಸಚಿವರ ಬದಲಾಗಿ ವಿಜಯೇಂದ್ರನಿಗೆ ಎಲ್ಲಾ ಖಾತೆ ನೀಡಿ ಎಂದು ಶಾಸಕ ಯತ್ನಾಳ ಗರಂಯಾದರು.