ಜನಾದೇಶವಾಣಿ ಬಿಗ್ ಇಂಪ್ಯಾಕ್ಟ್.. ಕರ ‘ಬಂಡಿ’ ವಸೂಲಿ ಬಂದ್…

ಜನಾದೇಶವಾಣಿ ಬಿಗ್ ಇಂಪ್ಯಾಕ್ಟ್.. ಕರ ‘ಬಂಡಿ’ ವಸೂಲಿ ಬಂದ್…

ಶೇರ್‌ ಮಾಡಿ
 •  
 •  
 •  
 •  
 •  
 •  

ಕೊಪ್ಪಳ: ಕೋವಿಡ್ ಲಾಕ್ ಡೌನ್ ವೇಳೆಯಲ್ಲಿ ದೃಢೀಕರಣ ಒದಗಿಸುವ ನೆಪದಲ್ಲಿ ಕರ ವಸೂಲಿ ಮಾಡುತ್ತಿದ್ದ ಪಂಚಾಯತಿಗೆ ಭಾರೀ ಆಘಾತವನ್ನು ಜನಾದೇಶ ವಾಣಿ ನೀಡಿದೆ.

ಕೊಪ್ಪಳ ಜಿಲ್ಲೆಯ ಬಹದ್ದೂರ ಬಂಡಿ ಗ್ರಾಮ ಪಂಚಾಯತಿನವರು ಕರ ವಸೂಲಿ ಕುರಿತು ವಿಸ್ತೃತ ವರದಿಯನ್ನು ಜನಾದೇಶ ವಾಣಿ ಎಳೆಎಳೆಯಾಗಿ ಜನತೆಯ ಎದುರು ಬಿಚ್ಚಿಟ್ಟಿತ್ತು. ಅದಕ್ಕಾಗಿ ಈ ಸುದ್ದಿ ಪರಿಗಣಿಸಿ ಕೊಪ್ಪಳ ಸಿಇಓ ರಘುನಂದನ್ ಮೂರ್ತಿ ಅವರು ಬಂಡಿ ಗ್ರಾಮ ಪಂಚಾಯತಿ ಪಿಡಿಓ ಜ್ಯೋತಿಗೆ ಅವರಿಗೆ ಫೋನ್ ಮುಖಾಂತರ ಮೌಕಿಕವಾಗಿ ಖಡಕ್ ವಾರ್ನಿಂಗ್ ನೀಡುವ ಮೂಲಕ ವಸೂಲಿ ಹಣ ಸಾರ್ವಜನಿಕರಿಗೆ ನೀಡುವಂತೆ ಆದೇಶ ಮಾಡಿದ್ದಾರೆ.

ಸಾರ್ವಜನಿಕರ ಹಿತಕಾಯಬೇಕಿದ್ದ ಅಧಿಕಾರಿ ವಸೂಲಿಗೆ ಇಳಿದ್ದು ಎಷ್ಟರ ಮಟ್ಟಿಗೆ ಸರಿ.‌ ಅಲ್ಲದೇ, ಸರ್ಕಾರಿ ಕೆಲಸ ದೇವರ ಕೆಲಸ ಅನ್ನದೇ ದುಡ್ಡೇ ದೊಡ್ಡಪ್ಪ ಅನ್ನೋವಂತಾಗಿದೆ.ಅದಕ್ಕಾಗಿ ಇನ್ನಾದ್ರೂ ಜನ ಸೇವೆಯೇ ಜನಾರ್ಧನ ಸೇವೆ ಎನ್ನುವಂತಾಗ್ಲಿ ಈ ಪಂಚಾಯತಿ ಕೆಲಸಗಳು.

ಇನ್ನು ಈ ಬಗ್ಗೆ ಪಿಡಿಓ ಜ್ಯೋತಿ ಅವರನ್ನು ಕೇಳಿದ್ರೇ ಮತ್ತೇ ಅದೇ ಏರು ಧ್ವನಿ ಉತ್ತರ ನೀಡುತ್ತಾರೆ. ಆದ್ರೇ,ಕರ ವಸೂಲಿ ಮಾಡಿದ್ದು ತಪ್ಪು ಅನ್ನೊದನ್ನು ಹೇಳುತ್ತಿಲ್ಲ.ಈ ಅಧಿಕಾರಿ ಅಡ್ಡ ಗೋಡೆಯ ಮೇಲೆ ದ್ವೀಪಯಿಟ್ಟಂತೆ ಕೆಲಸ ಮಾಡುವುದಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.


ಶೇರ್‌ ಮಾಡಿ
 •  
 •  
 •  
 •  
 •  
 •  

Leave a Reply

Your email address will not be published. Required fields are marked *