-0 C
New York
Thursday, June 24, 2021
Home ಆರೋಗ್ಯ ಹಳ್ಳಿ ಹಳ್ಳಿಗೂ ಕೊರೋನಾ ಅಟ್ಯಾಕ್.. ಕಣ್ಣಿದ್ದು ಕಣ್ಣಿಲ್ಲದಂತೆ ವರ್ತಿಸುತ್ತಿರುವ ಅಧಿಕಾರಿಗಳು...

ಹಳ್ಳಿ ಹಳ್ಳಿಗೂ ಕೊರೋನಾ ಅಟ್ಯಾಕ್.. ಕಣ್ಣಿದ್ದು ಕಣ್ಣಿಲ್ಲದಂತೆ ವರ್ತಿಸುತ್ತಿರುವ ಅಧಿಕಾರಿಗಳು…

ಕೊಪ್ಪಳ: ಜಿಲ್ಲೆಯಾದ್ಯಂತ ಬಿಸಿಲಿನ ತಾಪಮಾನದಂತೆ ಹೆಮ್ಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚವಾಗುತ್ತಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕಟ್ಟಕಡೆಯ ಹಳ್ಳಿಗಳಾದ ರಾಂಪೂರ,
ವಕ್ಕನದುರ್ಗಾ, ನಿಲೋಗಲ್ ಸೇರಿದಂತೆ ವಿವಿಧ ಗ್ರಾಮಗಳಿಗೆ ಹೆಮ್ಮಾರಿ ವಕ್ಕರಿಸಿದೆ. ವಕ್ಕನದುರ್ಗಾ 5, ನಿಲೋಗಲ್ 5, ರಾಂಪೂರ ಗ್ರಾಮಗಳಲ್ಲಿ ತಲಾ 7ಸೋಂಕಿತರಲ್ಲಿ ವೈರಸ್ ದೃಢವಾಗಿದೆ. ಇಷ್ಟಾದ್ರೂ ಸಾರ್ವಜನಿಕರು ಮಾತ್ರ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿ ತಿರುಗಾಡುತ್ತಿದ್ದಾರೆ.

ವಕ್ಕನದುರ್ಗಾ, ರಾಂಪೂರ, ನಿಲೋಗಲ್ ಗ್ರಾಮಗಳಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಳ್ಳದೆ ಬೇಕಾಬಿಟ್ಟಿ ತಿರುಗಾಡುತ್ತಿದ್ದಾರೆ. ಇನ್ನು
ಕಟ್ಟಕಡೆಯ ಗ್ರಾಮಗಳಲ್ಲಿ ಇನ್ನಷ್ಟು ಸೋಂಕಿತರು ಪತ್ತೆ ಆಗುವ ಸಾಧ್ಯತೆ ಇದ್ದು, ಅಧಿಕಾರಿಗಳು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವುದರ ಮೂಲಕ ಸೋಂಕನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಇಲ್ಲದೇ ಹೋದರೆ ಹಳ್ಳಿ ಹಳ್ಳಿಗೂ ಈ ವೈರಸ್ ಕಟ್ಟಿಟ ಬುತ್ತಿಯಾಗಿದೆ‌.

RELATED ARTICLES

Leave a reply

Please enter your comment!
Please enter your name here

Most Popular

Recent Comments

error: Content is protected !!