ತಾಲ್ಲೂಕಿನ ಹಸಿರು ಪ್ರೇಮಿ ಚೆನ್ನಬಸಪ್ಪ ಮಗ್ಗದ ವರ್ಗಾವಣೆ.

ತಾಲ್ಲೂಕಿನ ಹಸಿರು ಪ್ರೇಮಿ ಚೆನ್ನಬಸಪ್ಪ ಮಗ್ಗದ ವರ್ಗಾವಣೆ.

ಶೇರ್‌ ಮಾಡಿ
 •  
 •  
 •  
 •  
 •  
 •  

ಕುಷ್ಟಗಿ : ತಾಲ್ಲೂಕಿನ ಕ್ಷೇತ್ರ ಶಿಕ್ಷಾಧಿಕಾರಿ ಆಗಿ ಎರಡೂವರೆ ವರ್ಷಕ್ಕೂ ಹೆಚ್ಚು ದಿನಗಳ ಕಾಲ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸೇವೆಸಲ್ಲಿಸಿದ್ದ ಚನ್ನಬಸಪ್ಪ ವರ್ಗಾವಣೆ.
ಮಕ್ಕಳು ಶಿಕ್ಷಕರ ಜೊತೆ ಅವಿನಾಭಾವ ಸಂಬಂಧ ಹೊಂದಿ ಕೊಂಡಿದ್ದ ಚನ್ನಬಸಪ್ಪ ಅವರ ವರ್ಗಾವಣೆಯಿಂದ ತಾಲ್ಲೂಕಿನ ಶಿಕ್ಷಕ ವರ್ಗಕ್ಕೆ ಮತ್ತು ಮಕ್ಕಳಿಗೆ ತುಂಬಲಾರದ ನಷ್ಟ ಆಗಿದೆ.

ಸಂಕಷ್ಟ ಸಮಯದಲ್ಲೂ ಕೂಡ ಹಗಲು ಇರುಳು ಎನ್ನದೆ ಸಿಬ್ಬಂದಿಗಳು ಶಿಕ್ಷಕರ ಜೊತೆಗೂಡಿ ಮಕ್ಕಳಿಗೆ ಸೋಂಕು ದೃಢ ಪಡದಂತೆ ಜಾಗೃತಿ ವಹಿಸಿದ್ದರು.ಇವರ ಫಲದಿಂದ ಎರಡು ಸಾರಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಶಾಂತಿಯುತವಾಗಿ ನಡೆಯುವುದರ ಜೊತೆಗೆ ಮಕ್ಕಳಿಗೂ ಕೂಡ ಸೋಂಕು ದೃಢ ಪಡದಂತೆ ಜಾಗೃತಿ ವಹಿಸಿದ್ದರು.ಚನ್ನಬಸಪ್ಪ ಅವರ ಸಹಕಾರ ಮಾರ್ಗದರ್ಶನದಿಂದ ತಾಲ್ಲೂಕಿನ ಬಹುತೇಕ ಶಾಲೆಗಳು ಕೂಡ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.

ಈಗಲೂ ಕೂಡ ಚನ್ನಬಸಪ್ಪ ಅವರನ್ನು ತಾಲ್ಲೂಕಿನ ಮಕ್ಕಳು ಹಸಿರು ಪ್ರೇಮಿ ಅಂತಲೇ ಕರೀತಾರೆ.

ಹುಬ್ಬಳ್ಳಿಯ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಾಧಿಕಾರಿ ಆಗಿದ್ದ ಅಶೋಕ್ ಕುಮಾರ್ ಸಿಂಧಗಿ ಅವರನ್ನು ತಾಲ್ಲೂಕಿನ ನೂತನ ಕ್ಷೇತ್ರ ಶಿಕ್ಷಾಧಿಕಾರಿ ಅಧಿಕಾರಿಯಾಗಿ ನೇಮಕ ಆಗಿದ್ದಾರೆ.


ಶೇರ್‌ ಮಾಡಿ
 •  
 •  
 •  
 •  
 •  
 •  

Leave a Reply

Your email address will not be published. Required fields are marked *