ಮಟ್ಕಾ ದಂಧೆಯನ್ನು ಬೇಧಿಸಿದ ಸಿಸಿಬಿ ಪೊಲೀಸರು, ಏಳು ಮಂದಿ ಬಂಧನ..

ಮಟ್ಕಾ ದಂಧೆಯನ್ನು ಬೇಧಿಸಿದ ಸಿಸಿಬಿ ಪೊಲೀಸರು, ಏಳು ಮಂದಿ ಬಂಧನ..

ಶೇರ್‌ ಮಾಡಿ
 •  
 •  
 •  
 •  
 •  
 •  

ಬೆಂಗಳೂರು :- ಅಪರಾಧ ಚಟುವಟಿಕೆ ನಿಯಂತ್ರಿಸಲು ಚುರುಕು ಕಾರ್ಯಾಚರಣೆ ಕೈಗೊಂಡಿರುವ ಸಿಸಿಬಿ ಪೋಲಿಸರು ಮುಂದುವರಿದ ಭಾಗವಾಗಿ ನಗರದಲ್ಲಿ ಮಟ್ಕ ಧಂದೆ ನಡೆಸುತ್ತಿದ್ದ ಏಳು ಅಡ್ಡೆಗಳ ಮೇಲೆ ದಾಳಿ ನಡೆಸಿ ಏಳು ಮಂದಿ ಬಂಧಿಸಿದ್ದಾರೆ.
ಹಲಸೂರು ಗೇಟ್ ಪೋಲಿಸ್ ಠಾಣೆ, ಕಲಾಸಿಪಾಳ್ಯ ಪೋಲಿಸ್ ಠಾಣೆ, ಸಿಟಿ ಮಾರುಕಟ್ಟೆ ಪೋಲಿಸ್ ಠಾಣೆ, ಎಸ್.ಜೆ. ಪಾರ್ಕ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿಸಿ ಏಳು ಮಟ್ಕ ಧಂದೆ ಅಡ್ಡಗಳ ಮೇಲೆ ದಾಳಿ ನಡೆಸಿ ಏಳು ಮಂದಿ ಜೂಜುಕೋರರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೋಲಿಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.

ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ಸ್ವಾಸ್ಥ್ಯಕ್ಕೆ ಕಂಟಕವಾಗಿದ್ದ ರೌಡಿ ಶೀಟರ್‍ಗಳಾದ ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನೀಲ್, ಜೆ.ಬಿ. ನಾರಾಯಣ ಹಾಗೂ ಅವರ ಸಹಚರರ ಮನೆಗಳ ಮೇಲೆ ಸಿಸಿಬಿ ಪೋಲಿಸ್ ದಾಳಿ ಮಾಡಿದ್ದರು. ಈ ವೇಳೆ 45 ಮನೆಗಳಲ್ಲಿ ದೊರೆತ ಮಾರಕಾಸ್ತ್ರಗಳು, ಅಕ್ರಮವಾಗಿ ಸಂಗ್ರಹಿಸಿದ್ದ ನಗದು, ಆಧಾರ್ ಕಾರ್ಡ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಮುಂದುವರೆದ ಭಾಗವಾಗಿ ಮಟ್ಕ ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ. ಅಪರಾಧ ಚಟುವಟಿಕೆ ತಡೆಗಟ್ಟಲು ನಿರಂತರವಾಗಿ ಕಾರ್ಯಾಚರಣೆ ಮಾಡಲಾಗುವುದು ಎಂದು ಹೇಳಿದರು.


ಶೇರ್‌ ಮಾಡಿ
 •  
 •  
 •  
 •  
 •  
 •  

Leave a Reply

Your email address will not be published. Required fields are marked *